ಕ್ಯಾಡಾವೆರೀನ್

ಲೈಸೀನನ್ನು ಡಿಕಾರ್ಬಾಕ್ಸಿಲೇಟ್ ಮಾಡಿದಾಗ ಬರುವ ಡೈಅಮೀನ್. ರೈಬೋಸೋಮುಗಳಲ್ಲಿ ಇದು ಇದೆಯೆಂದು ತಿಳಿದುಬಂದಿದೆ. ಹಿಸ್ಟಾಮಿನೇಸ್ ಅಥವಾ ಡೈಅಮೀನ್ ಆಕ್ಸಿಡೇಸ್ ಎಂಬ ಎನ್eóÉೈಮಿನಿಂದ ಇದು ಉತ್ಕರ್ಷಿತವಾಗುತ್ತದೆ. ಸಿಸ್ಟಿನ್ ಯೂರಿಯಾ ಎಂಬ ಕಾಯಿಲೆಯಲ್ಲಿ ಇದು ಮೂತ್ರದಲ್ಲಿ ವಿಸರ್ಜಿತವಾಗಬಹುದು. ಚಯಾಪಚಯ ಕ್ರಿಯೆಗಳಲ್ಲಿ ಇದರ ಸ್ಥಾನ  ಏನೆಂದು ಇನ್ನೂ ಸ್ಪಷ್ಟವಾಗಿಲ್ಲ.                                     				 (ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ